ಓದಲೇ ಬೇಕಾದ ಅಂಕಣ 1
ಅಂಚಿನಿಂದ ವೀಕ್ಷಿಸಿದ್ದು ಅರ್ಥಶಾಸ್ತ್ರಜ್ಞ ರತಿನ್ ರಾಯ್ ಅ೦ಕಣ (ಬಿಸಿನೆಸ್ ಸ್ಟ್ಯಾಂಡರ್ಡ್, 2 ಜುಲೈ 2021)
· ರಾಯ್ ಅ೦ಕಣ ಬರೆಯುತ್ತಿರುವದು ಗಂಭೀರ ಕೋವಿಡ್ ಕಾಯಿಲೆಯಿ೦ದ ಚೇತರಿಸಿಕೊಳ್ಳುತ್ತಿರುವಾಗ.
ಈ ಅ೦ಕಣದಲ್ಲಿ ರಾಯ್ ಭಾರತೀಯ ಆರ್ಥಿಕತೆಯ ಎಲ್ಲ ತಪ್ಪುಗಳನ್ನು ಅದ್ಭುತವಾಗಿ ಒಟ್ಟುಗೂಡಿಸುತ್ತಾರೆ: ಸತತ ಉದಾರೀಕರಣಗಳು ಅಸಮಾನ ಬೆಳವಣಿಗೆಯ ಮಾದರಿಗಳನ್ನು ಬೆಳೆಸಿದೆ; ಆರ್ಥಿಕತೆಯನ್ನು ‘ರೆ೦ಟ್ ಸೀಕಿಂಗ್’ ( ಉತ್ಪಾದಕತೆಯ ಯಾವುದೇ ಕೊಡುಗೆ ನೀಡದೆ ಹೆಚ್ಚುವರಿ ಸಂಪತ್ತನ್ನು ಪಡೆಯಲು ವಾಣಿಜ್ಯ ಸ೦ಸ್ಥೆಗಳು ಪ್ರಯತ್ನಿಸುತ್ತವೆ, ಉದಾಹರಣೆಗೆ ರಾಜಕೀಯ ವರ್ಚಸ್ಸ್ಸಿನ ಬಲದಿ೦ದಾಗಿ) ಎ೦ದು ವಿವರಿಸುವ ರಾಯ್, ಹಣಕಾಸು ವ್ಯವಸ್ಥೆಯನ್ನು ದುರ್ಬಲ ಮತ್ತು ದುರುಪಯೋಗಕ್ಕೆ ಒಳಗೊ೦ಡಿರುವದಾಗಿ, ಮತ್ತು ಕೇಂದ್ರ ಸರ್ಕಾರವನ್ನು ಕ್ಷೀಣಿತ ಮತ್ತು ಹೆಚ್ಚು ಹೆಚ್ಚಾಗಿ ನಿಷ್ಪರಿಣಾಮಕಾರಿಯಾಗಿ ವರ್ಣಿಸುತ್ತಾರೆ. ಸಾಂಕ್ರಾಮಿಕವು ಪರಿಸ್ಥಿತಿಯನ್ನು ಕಠೋರಗೊಳಿಸಿದೆ. ದಾಖಲೆ ಮಟ್ಟದ ಸಾಂಸ್ಥಿಕ ಲಾಭದ ಮಧ್ಯದಲ್ಲೂ ಬೆಳವಣಿಗೆಯ ದರ ಕುಸಿತ, ಜಿಡಿಪಿಯ ಸಂಕೋಚನ, ಅಸಮರ್ಪಕ ತೆರಿಗೆ-ಜಿಡಿಪಿ ಅನುಪಾತವನ್ನು ರಾಯ್ ಚಿ೦ತಾತ್ಮಕ ಪಟ್ಟಿಯಲ್ಲಿ ಸೇರಿಸುತ್ತಾರೆ. ಅಸಮರ್ಥತೆಯಿಂದಾಗಿ, ಸತತ ಐದು ವರ್ಷಗಳಿಂದ ಹೂಡಿಕೆ ಪೂಂಜೀಹರಣ ಗುರಿಗಳನ್ನು ಗಣನೀಯವಾಗಿ ತಪ್ಪಿಸಲಾಗಿದೆ. ಪರೋಕ್ಷ ತೆರಿಗೆಗಳು ತೆರಿಗೆ ವರಮಾನದಲ್ಲಿ ಮೇಲುಗೈ ಸಾಧಿಸುತ್ತಿವೆ. ಕೇ೦ದ್ರ ಮಟ್ಟದಲ್ಲಿ ರಾಜ್ಯಗಳಿಗೆ ಜಿಎಸ್ಟಿ ಪರಿಹಾರವನ್ನು ಪಾವತಿಸುವಲ್ಲಿ ವಿಳಂಬ, ಮತ್ತು ಸೆಸ್ ಗಳಿಗೆ ಹೆಚ್ಚಿನ ಅವಲ೦ಬನೆಯಿ೦ದಾಗಿ (ಇವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ) ರಾಜ್ಯಗಳ ಆರ್ಥಿಕ ಸ್ಥಿತಿಯು ದುರ್ಬಲಗೊಳಿಸಲ್ಪಟ್ಟಿದೆ.
ದುರ್ಬಲರನ್ನು ರಕ್ಷಿಸುವ ಬದಲು, ವಲಸೆ ಕಾರ್ಮಿಕರ ಸಂಕಟ ಮತ್ತು ಗ್ರಾಮೀಣ ಹತಾಶೆಗಳು ಆಕಾಶಕ್ಕೇರಿವೆ. ಸಾಂಕ್ರಾಮಿಕ ಅವಧಿಯಲ್ಲಿ ಗ್ರಾಮೀಣ ಮತ್ತು ನಗರ ನಿರುದ್ಯೋಗ ತೀವ್ರವಾಗಿ ಹೆಚ್ಚಿವೆ. ಕಾರ್ಪೊರೇಟ್‌ಗಳು (ಭಾರತದ ಪ್ರಮುಖ ಲಸಿಕೆ ತಯಾರಕರು ಸೇರಿದಂತೆ).ಸಮೃದ್ಧ ಲಾಭವನ್ನು ಪಡೆಯುತ್ತಲೇ ಇರುತ್ತವೆ. ಲಾಭ ಏರಿಕೆ, ಷೇರು ಮಾರುಕಟ್ಟೆ ಏರಿಕೆ, ತೆರಿಗೆ ಮತ್ತು ಸಾಲ ರಿಯಾಯಿತಿಗಳು ಕೋಟ್ಯಾಧಿಪತಿಗಳ ಸಂಪತ್ತನ್ನು ಹೆಚ್ಚಿಸುತ್ತವೆ . ಆದರೆ ಉತ್ಪಾದನೆ, ಉದ್ಯೋಗ, ವೇತನ ಎಲ್ಲವೂ ಕಡಿಮೆಯಾಗಿದೆ. ಕೇಂದ್ರ ಸರ್ಕಾರವು ಎಷ್ಟು ಹಣಕಾಸಿನ ವಿಷಯದಲ್ಲಿ ನಿಷ್ಪರಿಣಾಮಕಾರಿಯಾಗಿದೆಯೆಂದರೆ, ಜಿ ಡಿ ಪಿಯ ಶೇಕಡಾ 0.4 ರಷ್ಟು ಹೆಚ್ಚಳವನ್ನುಮಾತ್ರ (ಜಾಗತಿಕ ಸರಾಸರಿ ಶೇಕಡಾ 1.2 ಕ್ಕೆ ಹೋಲಿಸಿದರೆ) ಸಾ೦ಕ್ರಾಮಿಕದಲ್ಲಿ ಆರೋಗ್ಯ ರಕ್ಷಣೆಗಾಗಿ ಸಮರ್ಪಿಸಬಹುದು. ಹಣಕಾಸಿನ ನೀತಿಯನ್ನು ಬಳಸಿಕೊಂಡು ಆದಾಯ ಅಥವಾ ಜೀವನೋಪಾಯದ ಬೆಂಬಲವನ್ನು ಬಡವರಿಗೆ ಒದಗಿಸಲು ಸಾಧ್ಯವಿಲ್ಲ, ಆದರೂ ಕಾರ್ಪೊರೇಟ್ ಸಾಲ ಬಾಕಿ ಭ್ರಷ್ಟರಿಗೆ ಶೇಕಡಾ 95 ರಷ್ಟು ‘ಹೇರ್ಕಟ್’ (ಸಾಲ ರಿಯಾಯಿತಿ) ಗಳನ್ನು ನೀಡಲು ಹಣಕಾಸು ವ್ಯವಸ್ಥೆಯನ್ನು ಸರಿಪಡಿಸಬಹುದು.
ಎಲ್ಲಾ ಪ್ರಮುಖ ಪಾತ್ರಧಾರಿಗಳನ್ನು - ‘ನೀತಿ’ ಆಯೋಗ, ಹಣಕಾಸು ಸಚಿವಾಲಯ, ರಿಜರ್ವ್ ಬಾಂಕ್ - ಅವರವರ ವೈಫಲ್ಯಗಳು, ಅಸ್ಪಷ್ಟತೆಗಳು, ನಿಷ್ಪರಿಣಾಮಕಾರಿ ಕಾರಣಗಳಿಗಾಗಿ ರಾಯ್ ಹೊಣೆಗಾರರಾಗಿಸುತ್ತಾರೆ
ಕೊನೆಯಲ್ಲಿ, “ಸಾಂಕ್ರಾಮಿಕ ರೋಗಕ್ಕೆ ನಮ್ಮ ಸಾಮೂಹಿಕ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಮತ್ತು ನಮ್ಮ ಮುಂದೆ ತೆರೆದುಕೊಳ್ಳುವ ಭಯಾನಕ ಫಲಿತಾಂಶಗಳ ಸಾಧ್ಯತೆಯನ್ನು ಗಮನಿಸಿ ನಾವು ಗ೦ಭೀರವಾಗಿ ವಿಚಾರ ಮಾಡುವುದಕ್ಕೆ ಇನ್ನೂ ತಡವಾಗಿಲ್ಲ” , ರಾಯ್ ತೀರ್ಮಾನಿಸುತ್ತಾರೆ.
ಖ೦ಡಿತ ಓದಲಿಕ್ಕೆ ಯೊಗ್ಯವಾದ ಅ೦ಕಣ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ