ದಿ ವಯರ್ ನಲ್ಲಿ ಪ್ರಕಟಿತ
ಭಾರತದಲ್ಲಿ ಕೃಷಿಕರ ಆಂದೋಲನದಬಗ್ಗೆ ನೋಮ್ ಚೋಮ್ಸ್ಕಿ
ನಾಸಾ ವಿಜ್ಞಾನಿ ಮತ್ತು ಚಲನಚಿತ್ರ ನಿರ್ಮಾಪಕ ಬೇದಬ್ರತ ಪೇನ್‌ಗೆ ನೀಡಿದ ಸಂದರ್ಶನದಲ್ಲಿ, ಪ್ರೊ. ನೋಮ್ ಚೋಮ್ಸ್ಕಿ ಅವರು ಭಾರತದಲ್ಲಿ ರೈತರ ಪ್ರತಿಭಟನೆಯನ್ನು ಚರ್ಚಿಸುತ್ತಾರೆ.. ಇದನ್ನು 'ಕರಾಳ ಕಾಲದಲ್ಲಿ ಭರವಸೆಯ ದಾರಿದೀಪ' ಎಂದು ಕರೆದ ಖ್ಯಾತ ಭಾಷಾಶಾಸ್ತ್ರಜ್ಞ, ವಿದ್ವಾಂಸ ಮತ್ತು ಕಾರ್ಯಕರ್ತ, ಭಾರತದ ರೈತರು ನಡೆಸುವ ಪ್ರದರ್ಶನಗಳು ವಿಶ್ವದಾದ್ಯಂತ 'ಹೋರಾಟದ ಮಾದರಿ' ಎಂದು ಹೇಳುತ್ತಾರೆ.
ಜೂನ್ 26, 2021
ಬೇದಬ್ರತ ಪೇನ್: ಭಾರತೀಯ ರೈತರು ಪ್ರತಿಭಟನೆಯ ಮೂಲಕ ಸರಿಯಾದ ಕೆಲಸ ಮಾಡುತ್ತಿದ್ದಾರೆ ಎಂದು ನೀವು ಹೇಳುತ್ತೀರಾ ?
ಚೋಮ್ಸ್ಕಿ: ಖಂಡಿತ. ಇದು ಬಹಳ ಮುಖ್ಯವಾದ ಪ್ರತಿಭಟನೆಯಾಗಿದೆ ಮತ್ತು ದಬ್ಬಾಳಿಕೆ, ಹಿಂಸಾಚಾರ ಮತ್ತು ಎಲ್ಲಾ ರೀತಿಯ ಮಾಧ್ಯಮ ದಾಳಿಗಳ ನಡುವೆಯೂ ಅದನ್ನು ಮು೦ದುವರಿಸಿಕೊಳ್ಳಲು ಅವರು ಸಮರ್ಥರಾಗಿದ್ದಾರೆ ಎಂಬುದು ಅದ್ಭುತಕರವಾಗಿದೆ.
ಅವರು ಅಲ್ಲಿಯೇ ಪಟ್ಟು ಹಿಡಿದು ಮು೦ದುವರೆದು , ಅವರು ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಕೃಷಿ ಸಮುದಾಯದ ಹಕ್ಕುಗಳಿಗಾಗಿ ಮಾತ್ರವಲ್ಲ, ಆದರೆ ಭಾರತವು ತನ್ನ ನಾಗರಿಕರ ಹಕ್ಕುಗಳು ಮತ್ತು ಕಲ್ಯಾಣವನ್ನು ನೋಡಿಕೊಳ್ಳುವ ಕಾರ್ಯನಿರತ ಸಮಾಜವಾಗಿದೆ ಎನ್ನುವ ಉದ್ದೇಶದಿ೦ದ.
ಬೇದಬ್ರತ: “ಭಾರತೀಯ ಸರ್ಕಾರವು ಇಂದು ಭಾರತೀಯ ರೈತರಿಗೆ “ ನಿಮ್ಮ ಕೃಷಿಯನ್ನು ತೆರೆಯಿರಿ, ದೊಡ್ಡ ಉದ್ಯಮಗಳು ಬರಲಿ, ಕಾರ್ಪೊರೇಟ್‌ಗಳು ಬರಲಿ ಮತ್ತು ಅವರು ಹೂಡಿಕೆಯನ್ನು ತರುತ್ತಾರೆ ಮತ್ತು ಅವರು ಸ್ಪರ್ಧೆಯನ್ನು ತರುತ್ತಾರೆ ಅವರು ಸಮೃದ್ಧಿಯನ್ನು ತರುತ್ತಾರೆ ಅವರು ದಕ್ಷತೆಯನ್ನು ತರುತ್ತಾರೆ . ನೀವು ಭಾರತೀಯ ರೈತರಿಗೆ ಏನು ಹೇಳುತ್ತೀರಿ? ”
ಚೋಮ್ಸ್ಕಿ: ಅವರು ಕೇವಲ ವಾಸ್ತವಿಕ ಸತ್ಯಗಳನ್ನು ನೋಡಬೇಕೆಂದು ನಾನು ಸೂಚಿಸುತ್ತೇನೆ.
ನಿಮ್ಮ ಪ್ರಶ್ನೆಯನ್ನು ಪರಿಹರಿಸುವ ಅಧ್ಯಯನವನ್ನುಇತ್ತೀಚೆಗೆ ಪ್ರಸಿಧ್ಧ ರಾ೦ಡ್ ಕಾರ್ಪೊರೇಷನ್, ಅರೆ-ಸರ್ಕಾರಿ, ಹೆಸರುಪಡೆದ ಸ೦ಸ್ಥೆ, ಇತ್ತೀಚೆಗೆ ನಡೆಸಿತು . ಈ ಅಧ್ಯಯನದಲ್ಲಿ ಅವರು ಕಳೆದ 40 ವರ್ಷಗಳಲ್ಲಿ ಮಧ್ಯಮ ವರ್ಗದಿಂದ ಮತ್ತು ಕಾರ್ಮಿಕ ವರ್ಗದಿಂದ, ಅ೦ದರೆ ಆರ್ಥಿಕವಾಗಿ ಕೆಳದರ್ಜೆಯ ೯೦% ಜನಸ೦ಖ್ಯೆಯಿ೦ದ ಎಷ್ಟು ಸಂಪತ್ತನ್ನು ಅತಿ-ಶ್ರೀಮ೦ತ ಸೂಪರ್-ರಿಚ್ ವರ್ಗಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಅಂದಾಜು ಮಾಡಲು ಪ್ರಯತ್ನಿಸಿದರು.
ಸೂಪರ್ ಶ್ರೀಮಂತರನ್ನು ನೋಡಿದಾಗ ಅವರ ಸ೦ಖ್ಯೆ ಒಂದು ಶೇಕಡಾ ೧ರ ಅತಿಚಿಕ್ಕ ಭಿನ್ನರಾಶಿಯಷ್ಟಿದೆ (A fraction of one per cent). ಈ ಅಧ್ಯಯನದ ಅಂದಾಜು 40 ವರ್ಷಗಳಲ್ಲಿ 47 ಟ್ರಿಲಿಯನ್ ಡಾಲರ್ ಆಗಿತ್ತು ಈರೀತಿ ವರ್ಗಾವಣೆಯಾಗಿರುವದು. ಆದರೆ ಇದು ತೀರ ಕಡಿಮೆ ಅ೦ದಾಜು (severe underestimate) - ಇದು ಅವರಿಗೆ (ರಾ೦ಡ್ ಸ೦ಸ್ಥೆಗೆ) ತಿಳಿದಿದೆ ಎಂದು ನನಗೆ ಖಾತ್ರಿಯಿದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿ (ಐ ಎ೦ ಎಫ಼್) ಮತ್ತು ಇತರರು ತಮ್ಮದೇ ‘ದರೋಡೆ’ ಪ್ರಮಾಣದ ಸ್ಥೂಲ ಅಂದಾಜು ನೀಡಿದ್ದಾರೆ. ಇದರ ಪ್ರಕಾರ ಸರಿಸುಮಾರು ಮತ್ತೊಂದು 30 ರಿ೦ದ 40 ಟ್ರಿಲಿಯನ್ ಡಾಲರುಗಳಾಗಿರಬಹುದು. (ಟಿಪ್ಪಣಿ: ಒ೦ದು ಟ್ರಿಲಿಯನ್ ಅ೦ದರೆ ಒ೦ದು ಲಕ್ಷ ಕೋಟಿ).
ಬೇದಬ್ರತ : ಭಾರತದಲ್ಲಿ, ನಿಮಗೆ ತಿಳಿದಿದೆ, ಪ್ರತಿಭಟನೆ ನಡೆಸುತ್ತಿರುವವರನ್ನು, ಪ್ರತಿಭಟನೆ ನಡೆಸುತ್ತಿರುವ ರೈತರನ್ನು, ‘ವಿದೇಶಿ ಕೈಯಿಂದ ಪ್ರಭಾವಿತರಾಗಿರುವವರು’ ಎ೦ದು ಸರ್ಕಾರ ಕರೆಯುತ್ತದೆ. ಪ್ರತಿಭಟನಾ ಚಳುವಳಿಗಳಿಗೆ ಬಂದಾಗ ‘ವಿದೇಶಿ ಕೈ’ ಒ೦ದು ಕೊಳಕು ಪದವಾಗಿದ್ದರೆ, ವ್ಯವಹಾರ ಮತ್ತು ರಾಜಕೀಯದ ವಿಷಯಕ್ಕೆ ಬಂದಾಗ ‘ವಿದೇಶಿ ಹೂಡಿಕೆ ‘ ಅಂತಹ ಸ್ವಾಗತಾರ್ಹಪದವಾಗಿದೆ ಎಂಬುದು ತಮಾಷೆಯಲ್ಲವೇ
ಚೋಮ್ಸ್ಕಿ: ವಿದೇಶಿ ಹೂಡಿಕೆ ಅದ್ಭುತವಾಗಿದೆ. ವಿದೇಶಿ ದಬ್ಬಾಳಿಕೆಗಳು - ದಬ್ಬಾಳಿಕೆಗಳು -ನೆನಪಿಡಿ, ಕಾರ್ಪೊರೇಟ್ ನಿಗಮವು ಒಂದು ದಬ್ಬಾಳಿಕೆಯ ರಚನೆಯಾಗಿದೆ ಎಂಬುದನ್ನು ನೆನಪಿಡಿ - ವಿದೇಶಿ ದಬ್ಬಾಳಿಕೆಯು ನಿಮ್ಮ ಸಂಪನ್ಮೂಲಗಳನ್ನುಹೊಂದಲು, ನಿಮ್ಮ ದೇಶವನ್ನು ಹೊಂದಲು, ನಿಮ್ಮ ದೇಶದ ಭವಿಷ್ಯವನ್ನು ನಿರ್ಧರಿಸಲು, ನಿಮಗೆ ಬೇಕಿದ್ದರೆ, ವಿದೇಶಿ ಹೂಡಿಕೆಯನ್ನು ಸ್ವಾಗತಿಸಿ.
ಬೇದಬ್ರತ : ಹೋರಾಟ ನಡೆಸುತ್ತಿರುವ ಭಾರತದ ರೈತರಿಗೆ ನಿಮ್ಮ ಸ೦ದೇಶವೇನು ಕೇಳಲು ಇಚ್ಚಿಸುತ್ತೇನೆ.
ಚೋಮ್ಸ್ಕಿ: ಅವರು ಏನು ಮಾಡುತ್ತಿದ್ದಾರೆಂಬುದರ ಬಗ್ಗೆ ಅವರು ತುಂಬಾ ಹೆಮ್ಮೆ ಪಡಬೇಕು. ಅವರು ಧೈರ್ಯದಿಂದ, ಸಮಗ್ರತೆಯಿಂದ, ತಮ್ಮ ಸ್ವಂತ ಕುಟುಂಬಗಳ ಹಿತದೃಷ್ಟಿಯಿಂದ, ರೈತರಿಗಾಗಿ, ಭಾರತದ ಜನರಿಗಾಗಿ, ಸರಿಯಾದದ್ದನ್ನೇ ಮಾಡುತ್ತಿದ್ದಾರೆ. ಇದೇ ರೀತಿಯ ಕ್ರಮಗಳನ್ನು ತಮ್ಮ ತಮ್ಮ ಪರಿಸ್ಥಿತಿಯಲ್ಲಿ ನಿರ್ವಹಿಸಿ ತಮ್ಮದೇ ಆದ ಕಾರ್ಯಗಳಲ್ಲಿ ಈ ಮಾದರಿಯ ಹೋರಾಟವನ್ನು ಭಾರತದೊ೦ದಿಗೆ ಹೊ೦ದಿಕೊಳುವ ಪರಿಸ್ಥಿತಿಯಲ್ಲಿರುವ ಇಡೀ ಜಗತ್ತು ಮಾಡಬೇಕಾಗಿದೆ. ಆದ್ದರಿಂದ ನೀವು ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಹೆಮ್ಮೆ ಪಡಬೇಕು. ಇದು ಕರಾಳ ಕಾಲದಲ್ಲಿ ಜಗತ್ತಿಗೆ ಬೆಳಕಿನ ದಾರಿದೀಪವಾಗಿದೆ.
ಬೇದಬ್ರತ : ನೀವುಪರ್ಯಾಯ ಜಗತ್ತನ್ನು ರಚಿಸುವಲ್ಲಿ ಮುಂಚೂಣಿಯಲ್ಲಿದ್ದೀರಿ,
ನಿಮ್ಮಿಂದ ಈ ಉತ್ತೇಜಕ ಪದಗಳನ್ನು ಕೇಳುವುದು ಅದ್ಭುತವಾಗಿದೆ
ಚೋಮ್ಸ್ಕಿ: ಧನ್ಯವಾದಗಳು. ರೈತರ ಕ್ರಮಗಳೇ ಉತ್ತೇಜನಕಾರಿಯಾಗಿವೆ, ಅವು ಉತ್ತೇಜನಕಾರಿಯಾಗಿವೆ, ಹೌದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ