ನೋಮ್ ಚೋಮ್ಸ್ಕಿ
ವಿಕಿಪೀಡಿಯಾದಿಂದ
ಅವ್ರಾಮ್ ನೋಮ್ ಚೋಮ್ಸ್ಕಿ (ಜನನ ಡಿಸೆಂಬರ್ 7, 1928) ಒಬ್ಬ ಅಮೇರಿಕನ್ ಭಾಷಾಶಾಸ್ತ್ರಜ್ಞ, ದಾರ್ಶನಿಕ, ಅರಿವಿನ ವಿಜ್ಞಾನಿ, ಇತಿಹಾಸಕಾರ, ಸಾಮಾಜಿಕ ವಿಮರ್ಶಕ ಮತ್ತು ರಾಜಕೀಯ ಕಾರ್ಯಕರ್ತ. ಕೆಲವೊಮ್ಮೆ " ಆಧುನಿಕ ಭಾಷಾ ವಿಜ್ಞಾನದ ಪಿತಾಮಹ", ಎಂದು ಕರೆಯಲ್ಪಡುವ ಚಾಮ್ಸ್ಕಿ ವಿಶ್ಲೇಷಣಾತ್ಮಕ ತತ್ವಶಾಸ್ತ್ರ ಹಾಗೂ ಅರಿವಿನ ವಿಜ್ಞಾನದ ಕ್ಷೇತ್ರದಲ್ಲಿ ಗಣನೀಯ ವಿದ್ವಾ೦ಸ. ಆರಿಝೋನ ವಿಶ್ವವಿದ್ಯಾಲಯ ಮತ್ತುಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)ಗಳಲ್ಲಿ ಪ್ರಾಧ್ಯಾಪಕ. ಭಾಷಾಶಾಸ್ತ್ರ, ಯುದ್ಧ, ರಾಜಕಾರಣ,, ಮತ್ತು ಸಮೂಹ ಮಾಧ್ಯಮಗಳ ವಿಷಯಗಳಲ್ಲಿ 150 ಪುಸ್ತಕಗಳ ಲೇಖಕ. ಸೈದ್ಧಾಂತಿಕವಾಗಿ, ಅವರು ಅರಾಜಕ-ಸಿಂಡಿಕಲಿಸಂ ಮತ್ತು ಸ್ವಾತಂತ್ರ್ಯವಾದಿ ಸಮಾಜವಾದದೊಂದಿಗೆ ಹೊಂದಾಣಿಕೆ ಮಾಡುತ್ತಾರೆ.
ಯಹೂದಿ ವಲಸಿಗರಿಗೆ ಜನಿಸಿದ ಚೋಮ್ಸ್ಕಿ ಅರಾಜಕತಾವಾದದ ಆರಂಭಿಕ ಆಸಕ್ತಿಯನ್ನು ನ್ಯೂಯಾರ್ಕ್ ನಗರದ ಪರ್ಯಾಯ ಪುಸ್ತಕ ಮಳಿಗೆಗಳಿಂದ.ಬೆಳೆಸಿಕೊಂಡರು ಅವರುಅಧ್ಯಯನ ಮಾಡಿದ್ದು ಪೆನ್ಸಿಲ್ವೇನಿಯಾ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯಗಳಲ್ಲಿ .ಭಾಷಾ ಶಾಸ್ತ್ರಕ್ಕೆ ಅವರ ಕೊಡುಗೆ ಸಾಟಿಯಿಲ್ಲದ್ದು.
ವಿಯೆಟ್ನಾಂ ಯುದ್ಧದಲ್ಲಿ ಯುಎಸ್ ಪಾಲ್ಗೊಳ್ಳುವಿಕೆಯನ್ನುಅಮೆರಿಕದ ಸಾಮ್ರಾಜ್ಯಶಾಹಿಯ ಕೃತ್ಯವೆಂದು ಅವರು ಬಹಿರಂಗವಾಗಿ ವಿರೋಧಿಸಿದವರು. 1967 ರಲ್ಲಿ ಚೋಮ್ಸ್ಕಿ ಅವರ ಯುದ್ಧ ವಿರೋಧಿ ಪ್ರಬಂಧ ""ಬುದ್ಧಿಜೀವಿಗಳ ಜವಾಬ್ದಾರಿ”.ರಾಷ್ತ್ರೀಯ ಗಮನ ಸೆಳೆಯಿತು. ನವ್ಯ ಎಡಪಂಥೀಯರೊಂದಿಗೆ ಸ೦ಬ೦ಧ ಹೊ೦ದಿದ್ದ ಅವರು, ತಮ್ಮ ಕ್ರಿಯಾಶೀಲತೆಗಾಗಿ ಅನೇಕ ಬಾರಿ ಬಂಧಿಸಲ್ಪಟ್ಟರು ಮತ್ತು ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರ ಶತ್ರುಗಳ ಪಟ್ಟಿಯಲ್ಲಿ ಸ್ಥಾನ ಪಡೆದರು. ಎಡ್ವರ್ಡ್ ಸ್ ಹರ್ಮನ್ ಜೊತೆಗೆ ಚಾಮ್ಸ್ಕಿ ಪ್ರಚಾರದ ಮಾದರಿ ಮಾಧ್ಯಮದ ಟೀಕೆಯ ಮ್ಯಾನುಫ್ಯಾಕ್ಚರಿಂಗ್ ಕನ್ಸೆ೦ಟ್ (ಸಮ್ಮತಿಯ ಉತ್ಪಾದನೆ) ಪುಸ್ತಕವನ್ನು ಬರೆದರು. ಪೂರ್ವ ಟಿಮೊರನ್ನು ಇ೦ಡೊನೇಷ್ಯ ಸ್ವಾಧೀನ ಪಡಿಸಿಕೊ೦ಡದ್ದರ ವಿರುಧ್ಧ ಪ್ರಚಾರ ಮಾಡಿದರು. ನಾಝಿಗಳು ಯೆಹೂದೀಯರ ವಿರುಧ್ಧ ನಡೆಸಿದ ಹತ್ಯಾಕಾಂಡ ನಿರಾಕರಣೆ ಸೇರಿದಂತೆ (ತಾವೇ ಯೆಹೂದಿ ಮೂಲದವರಾಗಿದ್ದರೂ) ಬೇಷರತ್ತಾದ ವಾಕ್ ಸ್ವಾತಂತ್ರ್ಯವನ್ನು ಅವರು ಸಮರ್ಥಿಸಿಕೊಂಡು ಗಮನಾರ್ಹ ವಿವಾದವನ್ನು ಹುಟ್ಟುಹಾಕಿದರು. ಎಂಐಟಿಯಲ್ಲಿ ಸಕ್ರಿಯ ಬೋಧನೆಯಿಂದ ನಿವೃತ್ತಿಯಾದಾಗಿನಿಂದ, ತಮ್ಮ ರಾಜಕೀಯ ರಾಜಕೀಯ ಕ್ರಿಯಾಶೀಲತೆಯನ್ನು ಮುಂದುವರಿಸಿದ್ದಾರೆ. 2003 ರ ಇರಾಕ್ ಆಕ್ರಮಣವನ್ನು ವಿರೋಧಿಸಿದರು. . ಆರಿಝೋನ ವಿಶ್ವವಿದ್ಯಾಲಯದಲ್ಲಿ 2017 ರಲ್ಲಿ ಚೊಮ್ಸ್ಕಿ ಬೋಧಿಸಲು ಪ್ರಾರ೦ಭಿಸಿದರು.
ಅತಿಹೆಚ್ಚು ಉಲ್ಲೇಖಿಸಲ್ಪಟ್ಟ ಜೀವ೦ತ ವಿದ್ವಾಂಸರಲ್ಲಿ ಒಬ್ಬರಾದ, ಚೋಮ್ಸ್ಕಿ ವಿಶಾಲವಾದ ಶೈಕ್ಷಣಿಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರಿದ್ದಾರೆ. ಅವರು ಅರಿವಿನ ವಿಜ್ಞಾನಮತ್ತು ಭಾಷೆ ಮತ್ತು ಮನಸ್ಸಿನ ಅಧ್ಯಯನಗಳಿಗೆ ನೀಡಿರುವ ಕೊಡುಗೆ ಅಪಾರವೆ೦ದು ಗುರುತಿಸಲ್ಪಟ್ಟಿದೆ. .
ತಮ್ಮ ವಿಷಯ ವಿದ್ವತ್ತಿನೊಟ್ಟಿಗೆ ಚೊಮ್ಸ್ಕಿ ಅವರು ಅಮೇರಿಕಾದ ವಿದೇಶನೀತಿ, ನವೀನ ಮಾದರಿಯ ಆರ್ಥಿಕ ಉದಾರಿಕರಣ ಮತ್ತು ಸಮಕಾಲೀನ ರಾಜ್ಯಬಂಡವಾಳಶಾಹಿ, ಇಸ್ರೇಲ್-ಪ್ಯಾಲೆಸ್ಟೈನ್ ಸಮಸ್ಯೆ, ಸುದ್ದಿಯ ಮುಖ್ಯವಾಹಿನಿಗಳು, ಇವೆಲ್ಲವುಗಳ ಪ್ರಮುಖ ವಿಮರ್ಶಕರಾಗಿದ್ದಾರೆ. ಬಂಡವಾಳಶಾಹಿ ವಿರೋಧಿ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ಚಳುವಳಿಗಳಲ್ಲಿ ಚೊಮ್ಸ್ಕಿ ಅತ್ಯ೦ತ ಪ್ರಬಾವಶಾಲಿಯಾಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ