" ಈ ಪ್ರಕರಣದಲ್ಲಿ ಈ ಪ್ರಕ್ರಿಯೆಯೇ ಶಿಕ್ಷೆ" - ಸುಸಾನ್ ಅಬ್ರಹಾಂ, ಸುಪ್ರಸಿದ್ಧ ನಾಗರಿಕ ಹಕ್ಕುಗಳು ಮತ್ತು ಕಾರ್ಮಿಕ ವಕೀಲರು ಬಂಧನದಲ್ಲಿರುವ ಭೀಮಾ ಕೊರೆಗಾಂವ್ ಕಾರ್ಯಕರ್ತರು ( B K -16) ಯಾರು (ಭಾಗ- ೨) ಜುಲೈ ೨೯, ೨೦೨೧ರ೦ದು ಪ್ರಕಟಿಸಿದ ಲೇಖನವನ್ನು ಮು೦ದುರಿಸಿದೆ ಅರುಣ್ ಫೆರೀರಾ , 50, ಸೌಮ್ಯ, ಮೃದು ಸ್ವಭಾವದ ಸಾಮಾಜಿಕ ಕಾರ್ಯಕರ್ತ, ಫೆರೀರಾ ಅವರ ಹೆಸರು ಬಿಕೆ -16 ಗೆ ಸಂಬಂಧಿಸಿದಂತೆ ಅಪರೂಪವಾಗಿ ಬರುತ್ತದೆ. ಆದಾಗ್ಯೂ, ಬಿಕೆ -16 ರ ಹಿರಿಯ ಪುರುಷ ಸದಸ್ಯರಿಗೆ ಅವರ ದೈಹಿಕ ಕೆಲಸಗಳು ಮತ್ತು ಕಾಗದ ಪತ್ರಗಳ ಕೆಲಸಗಳಿಗೆ ಸಹಾಯ ಮಾಡುವವರು ಫೆರೆರಾ ಮತ್ತು ವೆರ್ನಾನ್ ಗೊನ್ಸಾಲ್ವಿಸ್ ಎಂದು ಇತರ ಸಂತ್ರಸ್ತರ ಕುಟುಂಬ ಸದಸ್ಯರು ಹೇಳುತ್ತಾರೆ. ಫಾದರ್ ಫ್ರೇಜರ್ ಮಸ್ಕರೇನ್ಹಸ್, ಹಿರಿಯ ಜೆಸ್ಯೂಟ್ ಮತ್ತು ಮುಂಬೈನ ಸೇಂಟ್ ಝೇ ವಿಯರ್ಸ್ ಕಾಲೇಜಿನ ಮಾಜಿ ಪ್ರಾಂಶುಪಾಲರು, ಜೈಲಿನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಸ್ಟಾನ್ ಸ್ವಾಮಿಯನ್ನು ನೋಡಿಕೊಂಡವರು ಫೆರೇರಾ ಎಂದು ಹೇಳಿದರು. ಫೆರೀರಾ ಬಹುಶಃ ಮೂಲ "ನಗರ ನಕ್ಸಲ್". ಅವರು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಬೆಳೆದ ಕಾರಣ, ಅವರನ್ನು 2007 ರಲ್ಲಿ ಮಾವೋವಾದಿಗಳೆಂದು ಆರೋಪಿಸಿ ಬಂಧಿಸಿದಾಗ ಅವರನ್ನು "ಬಾಂದ್ರಾ ನಕ್ಸಲ್" ಎಂದು ಕರೆಯಲಾಯಿತು. ಪೊಲೀಸರು ಹೇಳುವದರ ವಿರುದ್ಢ ಫೆರೇರಾ ಎಲ್ಗಾರ್ ಪರಿಷತ್‌ನಲ್ಲಿ ಇರಲಿಲ್ಲ. ಪ್ರಕರಣಕ್ಕೆ ಅವರ ಏಕೈಕ ಸ೦ಬ೦...
ಪೋಸ್ಟ್‌ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪೊಲೀಸ್ ದೌರ್ಜನ್ಯ ಮತ್ತು ನ್ಯಾಯಕ್ಕಾಗಿ ಅನ್ವೇಷಣೆ ಭಾರತದ ಸರ್ವ್ವೋಚ್ಛನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಶ್ರೀ ಎನ್ ವಿ ರಮಣ ಹೇಳಿದ್ದು : “ಮಾನವ ಹಕ್ಕುಗಳಿಗೆ ಮತ್ತು ದೇಹದ ಸುರಕ್ಷಿತತೆಗೆ ಪೊಲೀಸ್ ಠಾಣೆಗಳಲ್ಲಿ ಅತಿ ಹೆಚ್ಚು ಅಪಾಯವಿದೆ. ಸುಪರ್ದಿನಲ್ಲಿ ಚಿತ್ರಹಿಂಸೆ ಮತ್ತು ಇತರ ಪೊಲೀಸ್ ದೌರ್ಜನ್ಯಗಳು ನಮ್ಮ ಸಮಾಜದಲ್ಲಿ ಇನ್ನೂ ಚಾಲ್ತಿಯಲ್ಲಿರುವ ಸಮಸ್ಯೆಗಳು. ಸಾಂವಿಧಾನಿಕ ಘೋಷಣೆಗಳು ಮತ್ತು ಖಾತರಿಗಳ ಹೊರತಾಗಿಯೂ, ಪೋಲಿಸ್ ಠಾಣೆಗಳಲ್ಲಿ ಪರಿಣಾಮಕಾರಿ ಕಾನೂನು ಪ್ರಾತಿನಿಧ್ಯದ ಕೊರತೆಯು ಬಂಧಿತ ಜನರಿಗೆ ದೊಡ್ಡ ಕೇಡಾಗಿದೆ. ಈ ಆರಂಭಿಕ ಗಂಟೆಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ನಂತರ ಆರೋಪಿಯು ತನ್ನನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ನಿರ್ಧರಿಸುತ್ತದೆ.ಇತ್ತೀಚಿನ ವರದಿಗಳ ಪ್ರಕಾರ ಸಮಾಜದಲ್ಲಿ ಉಚ್ಚ ತರಗತಿಯವರೂ ಕೂಡ ನಿರ್ದಯ ಹಿ೦ಸೆಯಿಂದ ಪಾರಾಗುವುದಿಲ್ಲ.” (ಇ೦ಡಿಯನ್ ಎಕ್ಸ್ಪ್ರೆಸ್, ೯ ಅಗಸ್ಟ್ ೨೦೨೧) ‘ಪೊಲೀಸ್ ದೌರ್ಜನ್ಯವನ್ನು ಕೊನೆಗೊಳಿಸುವುದು’ ಎ೦ಬ ವಿಷಯದ ಬಗ್ಗೆ, ನಿವೃತ್ತ ವರಿಷ್ಟ ಪೊಲೀಸ್ ಅಧಿಕಾರಿ ಎಂ.ಪಿ. ನಥನ್ಯೇಲ್ ಬರೆಯುತ್ತಾರೆ: ‘ತಪ್ಪು ಮಾಡುವ ಸಿಬ್ಬಂದಿಗೆ ಯಾರೂ ಕಾನೂನಿನ ವ್ಯಾಪ್ತಿಯನ್ನು ಮೀರಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕಳುಹಿಸಲು ತಕ್ಷಣವೇ ಶಿಕ್ಷಿಸಬೇಕು’. (ಇ೦ಡಿಯನ್ ಎಕ್ಸ್ಪ್ರೆಸ್, ೯ ಅಗಸ್ಟ್ ೨೦೨೧)...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ನಷ್ಟಹೋದ ದಶಕಗಳು ಸರ್ಕಾರವು ಆರ್ಥಿಕತೆಯ ಮೂಲಭೂತ ಅಂಶಗಳನ್ನು ಸಮಾನತೆಯ ಪರವಾಗಿ ಮರುರೂಪಿಸಬೇಕು. (ಇಕನಾಮಿಕ್ ಅ೦ಡ್ ಪೊಲಿಟಿಕಲ್ ವೀಕ್ಲಿಯ ಸ೦ಪಾದಕೀಯ - 31 ಜುಲೈ 2021) ಮೂರು ದಶಕಗಳ ಹಿಂದೆ, 1990 ರ ದಶಕದ ಆರಂಭದಲ್ಲಿ, ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಭಾರತದಲ್ಲಿ ಆರ್ಥಿಕ ಪರಿಸ್ಥಿತಿಗಳ ತೀವ್ರ ಕುಸಿತವನ್ನು ಎತ್ತಿ ತೋರಿಸಿತು. ಬೆಳವಣಿಗೆಯು 1988 ರಲ್ಲಿ 9.7% ರಿಂದ 1989 ರಲ್ಲಿ 5% ಗೆ ಮತ್ತು 1990 ರಲ್ಲಿ ಕೇವಲ 1% ಕ್ಕೆ ಇಳಿದಿತ್ತು. ಮತ್ತು ದೇಶವು ಆಮದು-ರಫ಼್ತು ಅಸಮತೋಲನದಿಂದ ತತ್ತರಿಸಿತ್ತು. ಇದರಿ೦ದಾಗಿ ರಚನಾತ್ಮಕ ಸುಧಾರಣೆಗಳನ್ನು ಅಳವಡಿಸಿಕೊಳ್ಳಲು ಅನಿವಾರ್ಯವಾಯಿತು. ಆದಾಗ್ಯೂ, ಭಾರತದ ಪ್ರಸ್ತುತ ಸಂಕಷ್ಟವು ಇನ್ನೂ ಕೆಟ್ಟದಾಗಿದೆ. ಕಳೆದ ಮೂರು ವರ್ಷಗಳಲ್ಲಿ ಬೆಳವಣಿಗೆಯು 6.5% ರಿಂದ 4% ಮತ್ತು ಮತ್ತಷ್ಟು -8% ಕ್ಕೆ ಕುಸಿದಿದೆ. ಆದರೆ 1990ರ ದಶಕಕ್ಕಿಂತ ಭಿನ್ನವಾಗಿ, ಭಾರತವು ಈಗ ಯಾವುದೇ ಆಕಸ್ಮಿಕವನ್ನು ಪೂರೈಸಲು ಬೃಹತ್ ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿದೆ. ಈ ಸ೦ಗ್ರಹ ಸುಧಾರಣೆಗಳೊಂದಿಗೆ ಹೆಚ್ಚು ಸಂಬಂಧ ಹೊಂದಿಲ್ಲ - ಇದನ್ನು ಈ ಅವಧಿಯಲ್ಲಿ ಪ್ರಮುಖ ತಾಂತ್ರಿಕ ಬದಲಾವಣೆಗಳಿಂದ ಸಾಧ್ಯವಾದ ವಿದೇಶಿ ರವಾನೆ ಮತ್ತು ಸೇವೆಗಳ ರಫ್ತು ಗಳಿಕೆಯಿಂದ ಸಾಧಿಸಲಾಗಿದೆ. ಆರ್ಥಿಕ ನೀತಿಯ ಉದಾರೀಕರಣದ ಪ್ರತಿಪಾದಕರು ಜಾಗತಿಕ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಮತ್ತು ಸರಕು ಮತ್ತು ಸೇವೆಗಳ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಭಾರತದಲ್ಲಿ ಬಡತನ ಮತ್ತೆ ಹೆಚ್ಚುತ್ತಿದೆ ಸ೦ತೋಷ್ ಮೆಹ್ರೋತ್ರ ಮತ್ತು ಜಜತಿ ಕೇಶರಿ ಪರಿದ ದಿ ಹಿ೦ದು ಪತ್ರಿಕೆಯ ಲೇಖನದ ಸಾರಾ೦ಶ - 4 ಅಗಸ್ಟ್ 2021 ಕರೋನವೈರಸ್ ಸಾಂಕ್ರಾಮಿಕತೆಗೆ ಮೊದಲು ಆರ್ಥಿಕತೆಯು ಒಂಬತ್ತು ತ್ರೈಮಾಸಿಕಗಳಿಂದ ನಿಧಾನವಾಗುತ್ತಿದೆ ಎಂದು ನಮಗೆ ತಿಳಿದಿದೆ. 2017-18ರಲ್ಲಿ ನಿರುದ್ಯೋಗವು 45 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ. 1973 ರಿಂದ 2012 ರವರೆಗೆ ಬಡತನದ ಕುಸಿತದ ಸ್ಪಷ್ಟ ಪಥವಿದೆ. ವಾಸ್ತವವಾಗಿ, ಭಾರತವು ಬಡತನದ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿದಾಗಿನಿಂದ, ಬಡತನದ ಸಂಭವವು ಯಾವಾಗಲೂ ಕಡಿಮೆಯಾಗುತ್ತಲೇ ಇತ್ತು. ಇದು 1973-4 ರಲ್ಲಿ 54.9% ಆಗಿತ್ತು; 1983-84 ರಲ್ಲಿ 44.5%; 1993-94ರಲ್ಲಿ 36% ಮತ್ತು 2004-05ರಲ್ಲಿ 27.5%. (ದತ್ತಾ೦ಶಗಳ ಮತ್ತು ಬಡತನ ರೇಖೆಗಳ ಚರ್ಚೆ ಇಲ್ಲಿ ಪುನರಾವರ್ತಿಸುತ್ತಿಲ್ಲ) ನಗರ ಮತ್ತು ಗ್ರಾಮೀಣ ಬಡತನದಲ್ಲಿ ಏರಿಕೆ ಭಾರತದ ಬಡತನವನ್ನು ಅಂದಾಜಿಸುವ ಇತಿಹಾಸದಲ್ಲಿ ಮೊದಲ ಬಾರಿಗೆ, 2011-12ರ ನಂತರ ಬಡತನದ ಹೆಚ್ಚಳವು ಕಂಡುಬಂದಿದೆ. 2012 ರಿಂದ 2018 ರ ನಡುವಿನ ಗ್ರಾಮೀಣ ಬಳಕೆ ( ಸರಕು ಮತ್ತು ಸೇವೆಗಳ ಮೇಲೆ ಕುಟುಂಬದ ಖರ್ಚು) 8%ರಷ್ಟು ಕಡಿಮೆಯಾಗಿದ್ದರೆ, ನಗರ ಬಳಕೆ ಕೇವಲ 2%ರಷ್ಟು ಹೆಚ್ಚಾಗಿದೆ. ಭಾರತದ ಜನಸಂಖ್ಯೆಯ ಬಹುಪಾಲು (ಖಂಡಿತವಾಗಿಯೂ 65%ಕ್ಕಿಂತಲೂ ಹೆಚ್ಚು) ಗ್ರಾಮೀಣವಾಗಿರುವುದರಿಂದ, ಭಾರತದಲ್ಲಿ ಬಡತನವು ಪ...