ಸ್ಪಿನೋಜಾ : ಧರ್ಮ, ನಾಸ್ತಿಕತೆ, ಮತಾಂಧತೆ (ಭಾಗ ೨) ಮತಾಂಧತೆ ಇಷ್ಟೊಂದು ವಿನಾಶಕಾರಿಯಾಗಿದ್ದರೆ, ಅದು ಏಕೆ ಸಾಮಾನ್ಯವಾಗಿದೆ ಎಂದು ನಾವು ಆಶ್ಚರ್ಯಪಡಬಹುದು. ಅನೇಕರು ಈ ಮಾರ್ಗವನ್ನು ಏಕೆ ಆರಿಸಿಕೊಳ್ಳುತ್ತಾರೆ? ಸ್ಪಿನೋಜಾ ನೀಡುವ ಉತ್ತರ: ಮತಾಂಧತೆಯು ಆಕರ್ಷಕವಾದ ಪ್ರಲೋಭವನ್ನು ನೀಡುತ್ತದೆ. ಅನಿಶ್ಚಿತತೆಯ ಕಾಲದಲ್ಲಿ ಸಂಪೂರ್ಣ ಖಚಿತತೆ. ಸಂಕೀರ್ಣ, ಗೊಂದಲಮಯ ಜಗತ್ತಿನಲ್ಲಿ, ಮತಾಂಧನಿಂದ ಎಲ್ಲಾ ಪ್ರಶ್ನೆಗಳಿಗೆ ಸರಳ ಉತ್ತರಗಳ ಭರವಸೆ , ಪ್ರತ್ಯೇಕತೆಯ ಬಲವಾದ ಗುರುತು, ನೈತಿಕ ಶ್ರೇಷ್ಠತೆಯ ಭಾವನೆ (ಭ್ರಮೆ ?). ಇದು ಮಾದಕ ವ್ಯಸನದಂತಿದೆ ಏಕೆಂದರೆ ಇದು ತಾತ್ಕಾಲಿಕವಾಗಿ ಅಸ್ತಿತ್ವವಾದದ ವೇದನೆಯನ್ನು ನಿವಾರಿಸುತ್ತದೆ ಆದರೆ ಆಳವಾದ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ವಾಸ್ತವವಾಗಿ, ಇದು ಮತಾಂಧರಾದವರನ್ನು ಹದಗೆಡಿಸುತ್ತದೆ. ಮತಾಂಧನು ದುರಹಂಕಾರದ ಮೇಲೆ ಅವಲಂಬಿತನಾಗುತ್ತಾನೆ, ಅದರಿಂದಾಗಿ ಬೆಳೆಯಲು, ಕಲಿಯಲು ಅಥವಾ ವಿಕಸನಗೊಳ್ಳಲು ಅವನಿಂದ ಸಾಧ್ಯವಾಗುವುದಿಲ್ಲ. ಸ್ಪಿನೋಜಾ ಮತಾಂಧತೆ ಮತ್ತು ಸಹಿಷ್ಣುತೆಯ ನಡುವಿನ ಸಮಾಜದ ಪರ್ಯಾಯಗಳ ಚಕ್ರವನ್ನು ಗಮನಿಸುತ್ತಾನೆ. ಬಿಕ್ಕಟ್ಟು, ಭಯ ಮತ್ತು ಅನಿಶ್ಚಿತತೆಗಳ ಕ್ಷಣಗಳಲ್ಲಿ ಜನರು ಮತಾಂಧ ಸಂದೇಶಗಳಿಗೆ ಹೆಚ್ಚು ಭೇದ್ಯರಾಗುತ್ತಾರೆ. ಜನರಿಗೆ ಬೇಕಾಗಿರುವದು ಬಲಿಪಶುಗ...
ಪೋಸ್ಟ್‌ಗಳು
ಸೆಪ್ಟೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಸ್ಪಿನೋಜಾ (1632-1677) ಧರ್ಮ, ನಾಸ್ತಿಕತೆ, ಮತಾಂಧತೆ (ಭಾಗ ೧) - ದೈವ ನಂಬಿಕೆಯ ನಿಜವಾದ ಶತ್ರು ನಾಸ್ತಿಕತೆಯಲ್ಲ, ಆದರೆ ಮತಾಂಧತೆ ( ದಿ ಸೈಲೆಂಟ್ ಥಿಂಕರ್ ) ದೈವ ನಂಬಿಕೆಯ ಬಗ್ಗೆ ಹೆಚ್ಚು ಜನ ಚರ್ಚಿಸಲು ಧೈರ್ಯಮಾಡಲಾರದ ಆಳವಾದ ಸತ್ಯವಿದೆ. ಬಾರುಕ್ ಸ್ಪಿನೋಜಾ ಮೂರು ಶತಮಾನಗಳ ಹಿಂದೆ ಈ ಸತ್ಯವನ್ನು ತೆರೆದಿಟ್ಟನು. ಈ ತತ್ವಜ್ಞಾನಿಯ ವಿಚಾರಗಳು ದೀರ್ಘಕಾಲದಿಂದ ಚಾಲ್ತಿಯಲ್ಲಿರುವ ಆಲೋಚನಾ ವಿಧಾನಗಳಿಗೆ ಸವಾಲು ಹಾಕಬಹುದು. ಸ್ಪಿನೋಜ ಯಾರದ್ದಾದರೂ ಧರ್ಮ, ಆಧ್ಯಾತ್ಮಿಕತೆ ಮತ್ತು ದೇವರೊಟ್ಟಿಗೆ ಅವರ ವೈಯಕ್ತಿಕ ಸಂಬಂಧದ ದೃಷ್ಟಿಕೋನ ಇವುಗಳನ್ನೆಲ್ಲ ಸಂಪೂರ್ಣವಾಗಿ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಸ್ಪಿನೋಜ ನಾಸ್ತಿಕನಾಗಿದ್ದನು ಎಂಬ ಸಾಮಾನ್ಯ ಅಭಿಪ್ರಾಯ ತಪ್ಪು. ವಾಸ್ತವದಲ್ಲಿ ಎಲ್ಲದರಲ್ಲೂ ದೈವಿಕತೆಯ ಇರುವಿಕೆ ಯನ್ನು ಸಾರ್ವತ್ರಿಕವಾಗಿ ಗ್ರಹಿಸಿದ ಸ್ಪಿನೋಜಾ ನಾಸ್ತಿಕನಾಗಿರಲಿಲ್ಲ. ಆದರೆ ಅವನ ವಿಶ್ವಾಸದ ರೀತಿ ಆ ಕಾಲದ ಯಹೂದಿ ಮತ್ತು ಕ್ರಿಶ್ಚಿಯನ್ ಸಮುದಾಯಗಳನ್ನು ಆಳವಾಗಿ ಅಸ್ಥಿರಗೊಳಿವಂತಹದಾಗಿತ್ತು. ಪರಿಣಾಮವಾಗಿ ಕೇವಲ 24 ವರ್ಷ ವಯಸ್ಸಿನಲ್ಲಿ, ಸ್ಪಿನೋಜನನ್ನು ಆಮ್ಸ್ಟರ್‌ಡ್ಯಾಮ್‌ನ ಯಹೂದಿ ಪ್ರಾರ್ಥನಾಲಯ ಮತ್ತು ಒಕ್ಕೂಟ (ಸಿನಗೋಗ...