‘ಮಧ್ಯಮ ಆದಾಯದ ಬಲೆ’ “ಭಾರತವು ಮಧ್ಯಮ ಆದಾಯದ ಬಲೆಗೆ ಬೀಳಬಹುದು : ಆದರೆ ದೇಶವು ಎಂದಿಗೂ ವಿಕಸಿತ ಆಗದೆ ಇರ ಬಹುದೇ ? ಹಾಗೇನಾದರೂ ಆದಲ್ಲಿ ಇದು ನಮ್ಮ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರಬಹುದು” 2007 ರಲ್ಲಿ ವಿಶ್ವ ಬ್ಯಾಂಕ್ ಪ್ರಕಟಿಸಿದ ವರದಿಯಲ್ಲಿ ಮೊದಲಬಾರಿಗೆ "ಮಧ್ಯಮ ಆದಾಯದ ಬಲೆ" ಎಂಬ ಪರಿಕಲ್ಪನೆಯನ್ನು ಮತ್ತು ಪದಗುಚ್ಛವನ್ನು ಸೂಚಿಸಲಾಯಿತು. ‘ಬಲೆ’ ಎ೦ದರೆ ಬಿಡಿಸಿಕೊಳ್ಳಲು ಕಠಿಣವಾದ ಒ೦ದು ಪರಿಸ್ಥಿತಿ. 2007 ರಲ್ಲಿಯೇ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಬಡತನ ಕಡಿತದ ಒಂದು ದಶಕದ ಹೊರತಾಗಿಯೂ ಅನೇಕ ಆರ್ಥಿಕತೆಗಳು - ವಿಶೇಷವಾಗಿ ಲ್ಯಾಟಿನ್ ಅಮೇರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ - ಹೆಚ್ಚಿನ ಆದಾಯದ ಸ್ಥಿತಿಗೆ ಏರುವ ಪ್ರಯತ್ನಗಳಲ್ಲಿ ಅಸಫ಼ಲವಾಗಿವೆ ಎಂಬುದು ಸ್ಪಷ್ಟವಾಗಿ ತೋರಿತ್ತು. ‘ಮಧ್ಯಮ’ - ದಿಂದ ‘ಹೆಚ್ಚಿನ’ - ಆದಾಯದ ಸ್ಥಿತಿಗೆ ಪರಿವರ್ತನೆಯನ್ನು ಸಾಧಿಸುವಲ್ಲಿ ಸಹಾಯ ಮಾಡಲು ಬೆಳವಣಿಗೆಯ ಅರ್ಥಶಾಸ್ತ್ರ ವಿಶ್ವಾಸಾರ್ಹ ಸಿದ್ಧಾಂತವನ್ನು, ಹಾಗೆಯೇ ಪರಿಣಾಮಕಾರಿ ಅಭಿವೃದ್ಧಿ ಕಾರ್ಯತಂತ್ರಗಳನ್ನು ನಿರ್ಮಿಸಲು ಉತ್ತಮವಾದ ಬೆಳವಣಿಗೆಯ ಚೌಕಟ್ಟನ್ನು, ಅರ್ಥಶಾಸ್ತ್ರಜ್ಞರು ಇನ್ನೂ ಒದಗಿಸಬೇಕಾಗಿಯೂ ತೋರಿತ್ತು. 2007 ರ ಪರೀಕ್ಷಾರ್ಥ ಕಲ್ಪನೆಯು ಇ೦ದು ಗಂಭೀರ ವಿಚಾರಕ್ಕೆ ಒಳಪಡಿಸುವ ವಿಷಯವ...
ಪೋಸ್ಟ್‌ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಭಾರತದ ಚುನಾವಣೆಯ ಬಗ್ಗೆ ಲ೦ಡನ್ನಿನ ಪ್ರಖ್ಯಾತ ದಿನಪತ್ರಿಕೆ ‘ದಿ ಗಾರ್ಡಿಯನ್’ ದೃಷ್ಟಿಕೋನ: ಭಿನ್ನಾಭಿಪ್ರಾಯವನ್ನು ಕಾನೂನುಬಾಹಿರಗೊಳಿಸುವ ಮೂಲಕ ಅನೈತಿಕ ಗೆಲುವು ಸಾಧಿಸುವುದು ಪ್ರಜಾಪ್ರಭುತ್ವವನ್ನು ಹಾನಿಗೊಳಿಸುತ್ತದೆ ಸಂಪಾದಕೀಯ ನರೇಂದ್ರ ಮೋದಿಯವರಿಗೆ ಮತ್ತೊಂದು ಜನಾದೇಶ ನೀಡುವ ಬಗ್ಗೆ ಭಾರತೀಯ ಮತದಾರರು ತೀವ್ರವಾಗಿ ಯೋಚಿಸಬೇಕು ಬುಧವಾರ 17 ಏಪ್ರಿಲ್ 2024 ದೇಶವನ್ನು ಮುನ್ನಡೆಸುವ ಪೈಪೋಟಿಯನ್ನು ಈಗಾಗಲೇ ಗೆದ್ದಿರುವ ಬಡಾಯಿಯ ನಡುವೆ ವಿಶ್ವದ ಅತಿದೊಡ್ಡ ಚುನಾವಣೆಗಳು ಭಾರತದಲ್ಲಿ ಈ ವಾರ ಪ್ರಾರಂಭವಾಗಿವೆ. ನರೇಂದ್ರ ಮೋದಿಯವರು ದೊಡ್ಡ ಸಂಸದೀಯ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ, ಅವರ ಸಾಧನೆಯು ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಸಾಧನೆಯನ್ನು ಸರಿಗಟ್ಟುತ್ತದೆ. ಚುನಾವಣಾ ಫಲಿತಾಂಶ ಏನೇ ಇರಲಿ, ಭಾರತೀಯ ಪ್ರಜಾಪ್ರಭುತ್ವ ಸೋಲುವದ೦ತೂ ಖಚಿತ. ಯಾಕೆ ? ಶ್ರೀ ನೆಹರೂ ಅನಾಮಧೇಯವಾಗಿ ತಮ್ಮದೇ ನಾಯಕತ್ವವನ್ನು ತಾವೇ ಟೀಕಿಸಿ ದ್ದರೆ, ಅವರಿಗೆ ಭಿನ್ನವಾಗಿ ಶ್ರೀ ಮೋದಿಯವರು ತಮ್ಮ ವಿರೋಧಿಗಳನ್ನು ಅಸಡ್ಡೆಯಿ೦ದ ಕಾಣುತ್ತಾರೆ. ದೈನಂದಿನ ಆಡಳಿತದಲ್ಲಿ ವಿಚಾರಗಳ ಸ್ಪರ್ಧೆಗೆ ಅವಕಾಶ ನೀಡುವದಲ್ಲದೆ ನಾಗರಿಕರನ್ನು ಸಮಾನವಾಗಿ ಪರಿಗಣಿಸಿದಾಗ ಪ್ರಜಾಪ್ರಭುತ್ವವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಮೋದಿಯವರ ಭಾರತದಲ್ಲಿ ಇವುಗಳ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಉದಾರವಾದಿ ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ವಹಿಸುವವರಿಗೆ ೨೦೨೪ರ ವರ್ಷ ಕಳವಳವನ್ನುಂಟು ಮಾಡುತ್ತದೆ. ಸಿದ್ಧಾಂತದಲ್ಲಿ ಇದು ಪ್ರಜಾಪ್ರಭುತ್ವದ ವಿಜಯದ ವರ್ಷವಾಗಿರಬೇಕು. ಪ್ರಾಯೋಗಿಕವಾಗಿ ಇದು ಅದರ ವಿರುದ್ಧವಾಗಿರುತ್ತದೆ. ಜಗತ್ತಿನ ಅರ್ಧಕ್ಕಿ೦ತ ಹೆಚ್ಚು ಜನರು ೨೦೨೪ ರಲ್ಲಿ ರಾಷ್ಟ್ರವ್ಯಾಪಿ ಚುನಾವಣೆಗಳನ್ನು ನಡೆಸುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ.ಈ ಮೈಲಿಗಲ್ಲನ್ನು ತಲುಪಿರುವುದು ಇದೇ ಮೊದಲು .ಮತದಾರರ ಮತದಾನದ ಇತ್ತೀಚಿನ ಮಾದರಿಗಳನ್ನು ಆಧರಿಸಿ, ೭೦ ಕ್ಕೂ ಹೆಚ್ಚು ದೇಶಗಳಲ್ಲಿ ಸುಮಾರು ೨ ಶತಕೋಟಿ ಜನರು ಮತದಾನಕ್ಕೆ ಹೋಗುತ್ತಾರೆ ಎ೦ದು ಲೆಕ್ಕ ಮಾಡಬಹುದು. ಬ್ರಿಟನ್‌ನಿಂದ ಬಾಂಗ್ಲಾದೇಶ, ಭಾರತದಿಂದ ಇಂಡೋನೇಷ್ಯಾದ ವರೆಗೂ ಮತದಾನ ನಡೆಯಲಿದೆ. ಹೀಗಾಗಿ ಇದು ಪ್ರಜಾಪ್ರಭುತ್ವದ ವಿಜಯೋತ್ಸವದ ವರ್ಷ ಎಂದು ತೋರಬಹುದು. ಆದರೆ ನಿಜಕ್ಕೂ ಅದು ವಿರುದ್ಧವಾಗಿರುತ್ತದೆ. ಅನೇಕ ಚುನಾವಣೆಗಳು ಉದಾರ ನೀತಿಗಳು ಮತ್ತು ಆಚರಣೆಗಳಿಗೆ ವಿರುದ್ಧವಾಗಿರುವ ಆಡಳಿತಗಾರರನ್ನು ಭದ್ರಪಡಿಸುತ್ತವೆ. ಇತರ ಅನೇಕ ಚುನಾವಣೆಗಳು ಭ್ರಷ್ಟರು ಮತ್ತು ಅಯೋಗ್ಯರನ್ನು ಪುರಸ್ಕರಿಸುತ್ತವೆ. ಅತ್ಯಂತ ಪ್ರಮುಖ ಸ್ಪರ್ಧೆಯಾದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯು ತುಂಬಾ ವಿಷಪೂರಿತ ಮತ್ತು ಧ್ರುವೀಕರಣವಾಗಿದ್ದು ಅದು ಜಾಗತಿಕ ರಾಜಕೀಯದ ಮೇಲೆ ವಿಷಣ್ಣತೆಯನ್ನು ಹೂಡುತ್ತದೆ. ಉಕ್ರೇನ್‌ನಿಂದ ಮಧ್ಯಪ್ರಾಚ್ಯದವರೆಗೆ ನಡೆಯ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಹೆನ್ರಿ ಕಿಸ್ಸಿಂಜರ್, ಲಕ್ಷಗಟ್ಟಲೆ ಸಾವುಗಳಿಗೆ ಜವಾಬ್ದಾರರಾಗಿರುವ US ರಾಜತಾಂತ್ರಿಕ, 100 ನೇ ವಯಸ್ಸಿನಲ್ಲಿ ನಿಧನರಾದರು " ಹೆನ್ರಿ ಕಿಸ್ಸಿಂಜರ್ ಅವರಂತೆ ಪ್ರಪಂಚದಾದ್ಯಂತ ಅನೇಕ ಸ್ಥಳಗಳಲ್ಲಿ ಹೆಚ್ಚು ಸಾವು, ವಿನಾಶ ಮತ್ತು ಮಾನವ ಸಂಕಟಗಳಿಗೆ ಜವಾಬುದಾರರು ಬೇರೆ ಯಾರೂ ಇಲ್ಲ." ನಿಕ್ ಟರ್ಸ್ ಲೇಖನ ನವೆಂಬರ್ 29 2023, 9:49 p.m. ಅಮೆರಿಕಾದ ಇಬ್ಬರು ರಾಷ್ಟ್ರಧ್ಯಕ್ಷರ ಅಡಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಕಾರ್ಯದರ್ಶಿ ಮತ್ತು ದೀರ್ಘಾವಧಿಯ ಅಮೆರಿಕಾದ ವಿದೇಶಾಂಗ ನೀತಿ ಸ್ಥಾಪನೆಯಲ್ಲಿ ಅಧಿಕೃತವಾಗಿ ಹಾಗೆಯೇ ಪರದೆಯ ಹಿಂದೆ ಕಾರ್ಯ ಮಾಡಿದ ಹೆನ್ರಿ ಕಿಸಿಂಜರ್, ೨೦೨೩ ನವೆಂಬರ್ ೨೯ ರಂದು ನಿಧನರಾದರು. ಅವರು ೧೦೦ ವರ್ಷ ವಯಸ್ಸಿನವರಾಗಿದ್ದರು. ಕಿಸ್ಸಿಂಜರ್ ವಿಯೆಟ್ನಾಂ ಯುದ್ಧವನ್ನು ವಿಸ್ತರಿಸಲು ಮತ್ತು ಆ ಸಂಘರ್ಷವನ್ನು ತಟಸ್ಥ ಕಾಂಬೋಡಿಯಾಕ್ಕೆ ವಿಸ್ತರಿಸಲು ಸಹಾಯ ಮಾಡಿದರು; ಕಾಂಬೋಡಿಯಾ, ಪೂರ್ವ ಟಿಮೋರ್ ಮತ್ತು ಬಾಂಗ್ಲಾದೇಶದಲ್ಲಿ ನರಮೇಧಗಳನ್ನು ಸುಗಮಗೊಳಿಸಿದರು; ದಕ್ಷಿಣ ಆಫ್ರಿಕಾದಲ್ಲಿ ಅಂತರ್ಯುದ್ಧಗಳನ್ನು ವೇಗಗೊಳಿಸಿದರು ಮತ್ತು ದಕ್ಷಿಣ ಅಮೆರಿಕದಾದ್ಯಂತ ದಂಗೆಗಳು ಮತ್ತು ಕೊಲೆಗಾರ ತಂಡಗಳನ್ನು ಬೆಂಬಲಿಸಿದರು . ಅವರ ಜೀವನಚರಿತ್ರೆಕಾರ ಗ್ರೆಗ್ ಗ್ರ್ಯಾಂಡಿನ್ ಪ್ರಕಾರ, ಕಿಸ್ಸಿ೦ಜರ್ ಅವರ ಕೈಗಳ ಮೇಲೆ ಕನಿಷ್ಠ 3೦ ಲಕ್ಷ ಜನರ ರಕ್ತವಿತ್...