
ಅನಿಶ್ಚಿತ ನ್ಯಾಯ : ಈಶಾನ್ಯ ದೆಹಲಿಯಲ್ಲಿ 2020 ರಲ್ಲಿ ನಡೆದ ಹಿಂಸಾಚಾರದ ಕುರಿತು ನಾಗರಿಕ ಸಮಿತಿಯ ವರದಿ ನ್ಯಾಯಮೂರ್ತಿ ( ನಿವೃತ್ತ ) ಮದನ ಬಿ . ಲೋಕೂರ್ , ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಧೀಶರು ( ಅಧ್ಯಕ್ಷರು ) ನ್ಯಾಯಮೂರ್ತಿ ( ನಿವೃತ್ತ ) ಎ . ಪಿ . ಶಾಹ್ , ನಿವೃತ್ತ ಮುಖ್ಯ ನ್ಯಾಯಾಧೀಶರು , ಮದ್ರಾಸ್ ಮತ್ತು ನವದೆಹಲಿ ಉಚ್ಚನ್ಯಾಯಾಲಯ ಗಳು, ಹಾಗೂ ಮಾಜಿ ಅಧ್ಯಕ್ಷರು , ಕಾನೂನು ಆಯೋಗ ನ್ಯಾಯಮೂರ್ತಿ ( ನಿವೃತ್ತ ) ಆರ್ . ಎಸ್ . ಸೋಧಿ , ಮಾಜಿ ನ್ಯಾಯಾಧೀಶರು , ಉಚ್ಚನ್ಯಾಯಾಲಯ , ನವದೆಹಲಿ ನ್ಯಾಯಮೂರ್ತಿ ( ನಿವೃತ್ತ ) ಅಂಜನ ಪ್ರಕಾಶ್ , ಮಾಜಿ ನ್ಯಾಯಾಧೀಶರು , ಉಚ್ಚನ್ಯಾಯಾಲಯ , ಪಾಟ್ನಾ ಶ್ರೀ . ಜಿ . ಕೆ . ಪಿಳ್ಳೆ , ಐ . ಎ . ಎಸ್ ( ನಿವೃತ್ತ ), ಮಾಜಿ ಗೃಹ ಕಾರ್ಯದರ್ಶಿ , ಭಾರತ ಸರ್ಕಾರ ಕಾರ್ಯಕಾರಿ ಸಾರಾಂಶ ೨೦೨೦ ನೇ ಸಾಲಿನ ಫೆಭ್ರವರಿ ೨೩ ಮತ್ತು ೨೬ ರ ನಡುವೆ ದೆಹಲಿಯ ಈಶಾನ್ಯಭಾಗದಲ್ಲಿ ನಡೆದ ಕೋಮುಗಲಭೆಯು ಇಡೀ ಜಿಲ್ಲೆಯನ್ನು ನಡುಗುವಂತೆ ಮಾಡಿತು . ಈ ನಡೆದ ಗಲಭೆಯು ೫೩ ಜನರ ಮರಣಕ್ಕೆ ಕಾರಣವಾಯಿತು ಮತ್ತು ನೂರ ಕ್ಕೂ ಹೆಚ್ಚು ಜನರು ಗಾಯಗೊಂಡರು . ಮನೆ , ಶಾಲೆ , ವಾಣಿಜ್ಯ ಸಂಸ್ಥೆ ಮತ್ತು ಪೂ...